ಪ್ರತಿದಿನ ಸಂತಸದ ದಿನ
ಸ್ವಲ್ಪ ಸಿಟ್ರಸ್ ನ ತಾಜಾತನಕ್ಕೆ ಕಿತ್ತಳೆ ಬಣ್ಣದ ರೋಮಾಂಚನ ಬೆರೆಸಿ. ಫೋಕಸ್ ಲೈಟ್ ಗಳು, ಖುಷಿ ನೀಡುವ ಕುಶನ್ ಗಳು ಮತ್ತು ಬೂದು ಬಣ್ಣದ ಕೌಚ್ ನಿಮ್ಮ ಕೋಣೆಯನ್ನು ಚಂಚಲತೆಯಿಂದ ತುಂಬುತ್ತವೆ. ನಿಮಗೆ ಸ್ಫೂರ್ತಿ ಬೇಕಾದಾಗಲೆಲ್ಲ ಈ ಜಾಗಕ್ಕೆ ಬನ್ನಿ.ಪ್ರತಿಯೊಂದು ಮನೆಗೆ ಹೊಂದುವ ಬಣ್ಣಗಳು
ಸಾಮಾನ್ಯಕ್ಕೆ ಸಮಾಧಾನಪಡಬೇಡಿ. ಸತ್ವಹೀನ ಬಣ್ಣಗಳಿಂದ ನಿಮ್ಮ ಮನೆಯನ್ನು ಶೃಂಗರಿಸಬೇಡಿ. ಬದಲಾಗಿ ಮನ ಸೂರೆಗೊಳ್ಳುವ ಕಿತ್ತಳೆ ಬಣ್ಣ, ಉತ್ಸಾಹಭರಿತ ಹಸಿರು ಮಿಶ್ರಿತ ನೀಲಿ ಬಣ್ಣ ಅಥವಾ ಕಣ್ಣು ಕೋರೈಸುವ ನೀಲಿ ಬಣ್ಣದ ಶೇಡ್ ಗಳಿಂದ ನಿಮ್ಮ ಹೊರಗೋಡೆಗಳನ್ನು ಶೃಂಗರಿಸಿ. ನಿಮ್ಮ ಮನೆಯನ್ನು ನಿಮ್ಮಂತೆಯೇ ಉತ್ಸಾಹಪೂರ್ಣ, ಸುಂದರ ಮತ್ತು ಅದ್ಭುತವಾಗಿಸಿ.ಬೆಳಗಿನ ತಾಜಾ ಹರಟೆ
ಸ್ವಲ್ಪ ಹೊತ್ತು ಬಿಸಿ ಕಾಫೀ ಜೊತೆ ಸಂತಸದ ಹರಟೆ ಆಸ್ವಾದಿಸಲು ಒಂದು ಆರಾಮದಾಯಕ ಕೋಣೆ ನಿರ್ಮಿಸಿ. ಕೆಲಸದ ಮಧ್ಯೆ ವಿಶ್ರಾಂತಿ ಬೇಕಾದಾಗ, ಈ ಜಾಗಕ್ಕೆ ಬನ್ನಿ. ಎದ್ದು ಕಾಣುವ ಬಣ್ಣಗಳು ಮತ್ತು ನಿಮಗಿಷ್ಟವಾದ ನೋಟ ಒಟ್ಟಿಗೆ ಸೇರಿದಾಗ, ಬೇರೆಯವರಿಗೂ ಈ ಜಾಗ ಮೆಚ್ಚುಗೆಯಾಗುತ್ತದೆ.ಬೇರೆ ಯುಗದಲ್ಲಿ ಪಾದಾರ್ಪಣೆ ಮಾಡಿ
ಕಳೆದುಹೋದ ಕಾಲದ ನೆನಪಿನ ಖಜಾನೆಯನ್ನು ಮತ್ತೊಮ್ಮೆ ತೆರೆದಿಡಲು ಈ ಕಲ್ಲುಗಳಿಗಿಂತ ಬೇರೆ ವಿಕಲ್ಪ ಇನ್ನೊಂದಿಲ್ಲ. ಈ ಕಲ್ಲುಗಳನ್ನು ಬಳಸಿ ನಿಮ್ಮ ಹೊರಗೋಡೆಗಳನ್ನು ನಿರ್ಮಿಸಿ, ಐವರಿ ಬಣ್ಣ ನೀಡಿ ಮೆರುಗು ಹೆಚ್ಚಿಸಿ. ಈಗ ಆರಾಮಾಗಿ ಕುಳಿತು, ನಿಮಗಿಷ್ಟವಾದ ಪಾನೀಯವನ್ನು ಸವಿಯುತ್ತ ಸೂರ್ಯಾಸ್ತವನ್ನು ಆನಂದಿಸಿ.ಮೊನೊಕ್ರೋಮ್ ನಲ್ಲಿ ಭವ್ಯತೆಯ ಇಣುಕು ನೋಟ
ನಿಮ್ಮ ಬೆಡ್ ರೂಮಿಗೆ ಅಗತ್ಯ ಸೌಂದರ್ಯ ನೀಡುವ ಅಲಂಕಾರ. ದಪ್ಪನೆಯ ಮೃದು ಹಾಸಿಗೆಯಲ್ಲಿ, ಗೋಡೆಗಳ ಭವ್ಯ ನೀಲಿ ಬಣ್ಣದಲ್ಲಿ ಮತ್ತು ಸರಳ ಸುಂದರ ಕಪ್ಪು ಬಿಳಿ ಬಣ್ಣಗಳ ಸಂಗಮದಲ್ಲಿ ದೊರೆಯುವ ತೃಪ್ತಿಕರ ವಿನ್ಯಾಸ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಗೋಡೆಗಳಿಗೆ ಸರಳ ಬಣ್ಣಗಳು ಬೇಕು. ಈ ಬಣ್ಣಗಳು ಅಂತಹ ಅನುಭವ ನೀಡುತ್ತವೆ.ಯಾವಾಗಲೂ ನಿಮ್ಮ ಮೊದಲ ಮನೆ
ಅಜ್ಜಿಯ ಅಡುಗೆಯ ಸುವಾಸನೆ, ಅಜ್ಜನ ಕುರ್ಚಿಯ ಶಬ್ದ ಮತ್ತು ಸುಡು ಬಿಸಿಲಡಿ ನೀವು ಆಡಿ ಬೆಳೆದ ಅಂಗಳ – ನೀವು ಹುಟ್ಟಿ ಬೆಳೆದ ಮನೆ ಸದಾ ವಿಶೇಷವಾದುದು. ಮನೆಗೆ ಮೆರುಗು ನೀಡುವ ಬಣ್ಣಗಳನ್ನು ಬಳೆಯಿರಿ, ನಿಮ್ಮ ಅಕ್ಕಪಕ್ಕದ ಮನೆಯವರು ನಿಬ್ಬೆರಗಾಗಿ ನೋಡುವಂತೆ ಮಾಡಿ.Latest Happenings in the Paint World
Get some inspiration from these trending articles
Get in Touch
Looking for something else? Drop your query and we will contact you.