ರೆಡ್ ವುಡ್ ನಲ್ಲಿ ಅರಳಿದ ಡೈನಿಂಗ್ ನ ರಾಜಕಳೆ
ಇಂದಿನ ನಗರದ ಮನೆಗಳಲ್ಲಿ ಸ್ಥಳಾವಕಾಶ ಬಹಳ ಕಡಿಮೆ ಇರುತ್ತದೆ. ವಿವಿಧ ಕೆಲಸಗಳಿಗಾಗಿ ಸ್ವಲ್ಪ ಅತ್ತ ಸ್ವಲ್ಪ ಇತ್ತ ಹೊಂದಾಣಿಕೆ ಮಾಡಿಕೊಳ್ಳುತ್ತಲೇ, ಡೈನಿಂಗ್ ರೂಮ್ ಗೆ ಹೊಸ ವ್ಯಾಖ್ಯಾನ ದೊರೆತಿದೆ. ಇಂದಿನ ವಾಸ್ತುಶಿಲ್ಪಿಗಳು ಮೊದಲಿನಂತೆ ಡೈನಿಂಗ್ ರೂಮ್ ಪ್ರತ್ಯೇಕವಾಗಿ ನಿರ್ಮಿಸದೇ, ಲಿವಿಂಗ್ ರೂಮ್ ನಲ್ಲೇ ನಿರ್ಮಿಸುತ್ತಿದ್ದಾರೆ.ಶಬ್ದಗಳ ಮಾಂತ್ರಿಕರಾಗಿ
ಇನ್ನು ಮುಂದೆ ನಿಮ್ಮ ಸ್ಟಡಿ ರೂಮ್ ಗಳು ಮತ್ತು ಮನೆಯಲ್ಲಿನ ಆಫೀಸುಗಳು ನೀರಸವಾಗಿ ಕಾಣುವುದು ಬೇಡ. ನಿಮ್ಮ ಮನಸ್ಸಿಗೆ ಶಾಂತಿ ನೀಡುವ ಅಥವಾ ನಿಮಗೆ ಸ್ಫೂರ್ತಿ ನೀಡುವಂತಹ ವಿಶೇಷ ಸ್ಥಳವನ್ನು ಸೃಷ್ಟಿಸಿ. ನಿಮ್ಮ ಸೌಂದರ್ಯ ಪ್ರಜ್ಞೆಯನ್ನು ಪ್ರತಿಬಿಂಬಿಸುವ ಪೆಸ್ಟೆಲ್ ಬಣ್ಣ ಬಳೆಯಿರಿ ಮತ್ತು ಅದ್ಭುತವಾದ ಫರ್ನಿಚರ್ ನಿಂದ ಮನೆಯನ್ನು ಅಲಂಕರಿಸಿ.ಶೋಭಾಯಮಾನ ಪ್ರವೇಶದ್ವಾರ ಕಟ್ಟಿ
ಮನಸ್ಸನ್ನು ಪ್ರಫುಲ್ಲಗೊಳಿಸುವ ವೇಟಿಂಗ್ ರೂಮ್. ತೆಳು ಬಣ್ಣ ಬಳೆದ ಗೋಡೆಗಳು ಬೆಳಕನ್ನು ಪ್ರತಿಫಲಿಸುತ್ತವೆ. ಕಣ್ಣು ಕೋರೈಸುವಂತೆ ಮಾಡಲು, ಸೆಂಟರ್ ಪೀಸ್ ರೂಪದಲ್ಲಿ ತಾಜಾ ಹೂವುಗಳನ್ನು ಉಪಯೋಗಿಸಬಹುದು. ಆಕರ್ಷಕ ನೆಲಹಾಸು ಸುತ್ತಲಿನ ವಾತಾವರಣದ ಭವ್ಯತೆಯನ್ನು ಹೆಚ್ಚಿಸುತ್ತವೆ.ಸಕ್ಕರೆ ಮತ್ತು ಮಸಾಲೆಯಂತೆ ಸೋಜಿಗದ ಕ್ಷಣಗಳು
ಚಹಾ ಮತ್ತು ತಿಂಡಿ ಸವಿಯಲು ಸ್ನೇಹಿತರು ಮನೆಗೆ ಬರುತ್ತಿದ್ದಾರೆಯೇ? ಅವರು ಮರೆಯಲಾಗದ ಔತಣಕೂಟ ಏರ್ಪಡಿಸಿ. ಗುಲಾಬಿ ಬಣ್ಣದ ಗೋಡೆಗಳಿಗೆ ಹೊಂದುವಂತಹ ಪೆಸ್ಟೆಲ್ ಬಣ್ಣದ ಕುಶನ್ ಗಳು. ಬೇಕೆಂದರೆ ಗೋಡೆಗಳನ್ನು ಡಿಕಾಲ್ ನಿಂದ ಅಲಂಕರಿಸಿ. ಅದಕ್ಕೆ ಹೆಚ್ಚು ಜಾಗವೂ ಬೇಕಿಲ್ಲ, ನಿಮ್ಮ ಗೋಡೆಗಳ ಅಂದ ಕೂಡ ಹೆಚ್ಚುತ್ತದೆ.ಸದ್ದು ಗದ್ದಲದಿಂದ ದೂರದಲ್ಲೊಂದು ಊರು
ದಿನವಿಡೀ ಕೆಲಸ ಮಾಡಿ ದಣಿದು ಬಂದ ನಂತರ ವಿಶ್ರಾಂತಿ ಪಡೆಯಲು ನಿಮ್ಮ ಬೆಡ್ ರೂಮ್ ಅನ್ನು ಸೂಕ್ತ ಜಾಗವಾಗಿಸಿ. ಪೆಸ್ಟೆಲ್ ಮಿಂಟ್, ಹಸಿರು ಬಣ್ಣದ ಗೋಡೆಗಳಿಗೆ ಹೊಂದುವಂತಹ ಕಂದು ಬಣ್ಣದ ಫರ್ನಿಚರ್. ದೀಪಗಳಿಂದ ಚೆಲ್ಲುವ ಮಂದ ಬೆಳಕು ನಿಮ್ಮ ವಿಶ್ರಾಂತಿಗೆ ಪೂರಕವಾಗಿರುತ್ತದೆ.ಸಾಗರ ದಡದಲ್ಲೊಂದು ಐಷಾರಾಮಿ ಗೂಡು.
ಕಡಲ ತೀರದಿ ಕನಸಿನ ಮನೆಯಿರುವಷ್ಟು ಭಾಗ್ಯಶಾಲಿಯಾಗಿದ್ದೀರಾ? ಹಾಗಾದರೆ, ಮನೆಗೆ ಮರಳಿನ ಬಣ್ಣಗಳು, ಒರಟಾದ ಟೆಕ್ಸ್ಚರ್ ನೀಡಿ, ಇಡೀ ಮನೆ ಸುತ್ತಮುತ್ತಲಿನ ವಾತಾವರಣದೊಂದಿಗೆ ಬೆರೆತು ಹೋಗುವಂತೆ ಮಾಡಿ. ನಿಮ್ಮನ್ನು ಸಾಗರದತ್ತ ಸ್ವಾಗತಿಸುವ ಅಂಗಳದಲ್ಲಿ ಸಂತಸದಿ ತೂಗಾಡುವ ತಾಳೆ ಮರಗಳು ಮತ್ತು ಮೊಗಸಾಲೆ.Latest Happenings in the Paint World
Get some inspiration from these trending articles
Get in Touch
Looking for something else? Drop your query and we will contact you.