Skip to main content
ಗುಲಾಬಿ ಕಳೆ
ಆರಾಮದಾಯಕ ಐಷಾರಾಮು
ನಿಮ್ಮ ಮುದ್ದು ಮಗಳಿಗೆ ಅವಳದೇ ಆದ ಕೋಣೆಯನ್ನು ಮೀಸಲಿಡಿ. ಅಲ್ಲಿ ಅವಳೂ ಟೀ ಪಾರ್ಟಿ ನಡೆಸಲಿ, ಗೊಂಬೆಗಳನ್ನು ಇಟ್ಟುಕೊಳ್ಳಲಿ ಮತ್ತು ನೇಲ್ ಪಾಲಿಶ್ ನಿಂದ ಹಿಡಿದು ಹೈ ಹೀಲ್ ಗಳನ್ನು ಇಟ್ಟುಕೊಳ್ಳಲಿ. ಅವಳದೇ ಆದ ಒಂದು ಜಗತ್ತು ಸೃಷ್ಟಿಸಿ. ಆ ಕೋಣೆಯನ್ನು ಅಚ್ಚುಕಟ್ಟಾಗಿರಿಸುವ ಕೆಲವು ಮುಖ್ಯ ಸಾಮಗ್ರಿಗಳನ್ನು ಒಟ್ಟುಗೂಡಿಸಿ – ಸ್ಟ್ಯಾಂಡ್ ಗಳು, ಟ್ರೇಗಳು ಇತ್ಯಾದಿ. ಜೊತೆಗೆ ಅವಳ ನಲ್ಮೆಯ ಬೊಂಬೆಗಳಿಗೊಂದು ಜಾಗವನ್ನು ಮೀಸಲಿರಿಸಲು ಮರೆಯಬೇಡಿ.
ಎಪಲೇಚಿಯನ್ ಕಲಾಕೃತಿ
ಇತಿಹಾಸದಲ್ಲೊಂದು ಇಣುಕು ನೋಟ
ಭವ್ಯ ಮತ್ತು ಶ್ರೀಮಂತ ಎಪಲೇಚಿಯನ್ ಯುಗಕ್ಕೆ ಪ್ರಯಾಣ ಬೆಳೆಸಿ. ವಿಸ್ಮಯಗೊಳಿಸುವ ವಿವಿಧ ಬಣ್ಣಗಳಲ್ಲಿ ಮಿಂದ ವರ್ಣನಾತೀತ ಗೋಡೆಗಳು. ಅವುಗಳ ಮೇಲೆ ಬೋಲ್ಡ್ ಪ್ರಿಂಟ್ ಹಾಕಿ, ಕಡು ಬಣ್ಣಗಳನ್ನು ಬಳೆಯಿರಿ ಮತ್ತು ಬೆರಗಾಗಿಸುವ ವಿನ್ಯಾಸಗಳನ್ನು ಮೂಡಿಸಿ. ಎಪಲೇಚಿಯನ್ ಜನರಿಗೆ ಇದೆಲ್ಲ ಇಷ್ಟವಾಗುತ್ತಿತ್ತು. ನಿಮಗೂ ಇಷ್ಟವಾಗುತ್ತದೆ.
ನಿಮ್ಮ ನೆಚ್ಚಿನ ಪುಟ್ಟ ಕೋಣೆ
ಇಲ್ಲಿ ನಿಮ್ಮ ಸವಿನೆನಪುಗಳಿಗೆ ಜೀವ ತುಂಬಿ
ಸವಿ ಸವಿ ನೆನಪುಗಳನ್ನು ಹೆಣೆಯಲೆಂದೇ ಮೀಸಲಿರಿಸಿದ ಆಕರ್ಷಕ ಕೋಣೆ. ಇಲ್ಲೇ ಆ ಮರವೊಂದು ಬೆಳೆಸಲಾಗಿದೆ, ಇಲ್ಲಿಯೇ ಪರಿವಾರದ ಸದಸ್ಯರೆಲ್ಲ ಸೇರಿ ಜೀವನವನ್ನು ಮೊಗೆ ಮೊಗೆದು ಸವಿಯುತ್ತಾರೆ ಮತ್ತು ಕಿಲಕಿಲ ನಗುವು ಪ್ರತಿಧ್ವನಿಸುತ್ತದೆ. ನಿಮ್ಮ ಮುಖದಲ್ಲಿ ಮುಗುಳ್ನಗೆ ಮೂಡಿಸುವ ಟೀಲ್ ಬಣ್ಣದ ಗೋಡೆಗಳು, ಡಾರ್ಕ್ ವುಡ್ ಟೋನ್ ಹೊಂದಿದ ಫರ್ನಿಚರ್ ಮತ್ತು ಸ್ಪಾಟ್ ಲೈಟಿಂಗ್.
ಮೂರು ಜನರ ಡಿನರ್‍/ರಾತ್ರಿ ಊಟ
ಒಟ್ಟಿಗೆ ಸೇರಿ, ಸಂತೋಷದ ಸಮಯ ಕಳೆಯಿರಿ.
ಯಾರಾದರೂ ಮನೆಗೆ ಬರುತ್ತಿದ್ದಾರಾ? ಅಥವಾ ಪರಿವಾರದಲ್ಲಿ ಹೊಸ ಸದಸ್ಯರ ಸೇರ್ಪಡೆಯಾಗುತ್ತಿದೆಯಾ? ಮೂರು ಜನ ಸೇರಿದಾಗ ಅದರ ಮಜವೇ ಬೇರೆ. ಗೋಡೆಗಳಿಗಾಗಿ ನೀವು ಎದ್ದು ಕಾಣುವ ಬಣ್ಣಗಳನ್ನು ಆಯ್ದುಕೊಂಡಲ್ಲಿ, ನಿಮ್ಮ ಕುರ್ಚಿಗಳನ್ನು ಪ್ರಿಂಟೆಡ್ ಡಿಸೈನ್ ಹೊದಿಕೆಗಳಿಂದ ಅಲಂಕರಿಸಿ. ಸೊಗಸಾದ ಬೆಳಕು ಮತ್ತು ಯಾರೂ ಕಂಡರಿಯದ ಪಾತ್ರೆಗಳಿಂದ ಮನೆಯ ಅಂದವನ್ನು ದ್ವಿಗುಣಗೊಳಿಸಿ.
ಮನೋಹರ ಅಡುಗೆ ಮನೆ
ಕಾಕ್ ಟೇಲ್ ಗಳು ಮತ್ತು ಹರಟೆ
ಸ್ನೇಹಿತರು ಮನೆಗೆ ಬಂದಾಗ ನಿಮ್ಮ ಅಡುಗೆ ಮನೆಯಲ್ಲೇ ಹರಟೆ ಹೊಡೆಯಿರಿ. ಬಾರ್ ಸ್ಟೂಲ್ ಜೊತೆಗೆ ಐಲ್ಯಾಂಡ್ ಟೇಬಲ್ ಇರುವ ಸ್ಥಳದಲ್ಲಿ ಕಾಕ್ ಟೇಲ್ ಸವಿಯಿರಿ. ಸುತ್ತಲೂ ಸ್ಟೀಲ್ ಗ್ರೇ ಬಣ್ಣ ಬಳೆಯಿರಿ. ಸುಂದರವಾದ ಬಣ್ಣ ಬಣ್ಣದ ಪಾತ್ರೆಗಳು ಮತ್ತು ವಿವಿಧ ಬಣ್ಣಗಳಿಂದ ಅಡುಗೆ ಮನೆಗೆ ಅಸಾಮಾನ್ಯ ಸೌಂದರ್ಯ ನೀಡಿ.
ಕಲಾತ್ಮಕ ಗರಿ
ಗರಿಯಂತಹ ನುಣುಪಾದ ಸ್ಪರ್ಶ ಸೇರಿಸಿ
ರೇಖೆಗಳು, ನಿಯಮಗಳು ಮತ್ತು ಪ್ರಬಲ ಗುರುತುಗಳೇ ಪ್ರಾಶಸ್ತ್ಯ ಪಡೆದಿರುವ ಜಗತ್ತಿನಲ್ಲಿ ನಿಮ್ಮ ಮನೆಯನ್ನು ಯಾವುದನ್ನೂ ಅನುಸರಿಸದ ನಿಮ್ಮದೇ ಆದ ವಿಭಿನ್ನ ಕಲ್ಪನೆಯಿಂದ ಶೃಂಗರಿಸಿ. ನಿಯಮಗಳನ್ನು ಮೀರಿ ನಿಂತ ಗರಿ, ಅಸಾಮಾನ್ಯ ಆಕೃತಿ ಹೊಂದಿದ ಹೂಕುಂಡಗಳು ಅಥವಾ ವಿಭಿನ್ನವಾಗಿ ಕಾಣುವ ಬಣ್ಣ. ಸರಿಸಾಟಿ ಇಲ್ಲದ ನೋಟ. ನಿಮ್ಮ ವ್ಯಕ್ತಿತ್ವದ ಪ್ರತಿಕೃತಿ.
  • That favourite corner

Latest Happenings in the Paint World

Get some inspiration from these trending articles

Get in Touch

Looking for something else? Drop your query and we will contact you.

  • Get in Touch
  • Store Locator
  • Download App
×

Get in Touch

Looking for something else? Drop your query and we will contact you.