Skip to main content
ನಿಮ್ಮ ಗ್ರಾಂಥಾಲಯ
ಜಾಣ ನುಡಿಗಳ ಭಂಡಾರ
ಮಳೆಯ ಹನಿಗಳು ಕಿಟಕಿಯ ಗಾಜಿಗೆ ಹೊಡೆದು ಜಾರುತ್ತಿರುವಾಗ, ಮಣ್ಣಿನ ಸುವಾಸನೆ ಎಲ್ಲೆಡೆ ಹರಡಿರುವಾಗ, ನಿಮ್ಮ ಕೈಯಲ್ಲಿ ಬಿಸಿ ಬಿಸಿ ಚಹಾ ತುಂಬಿದ ಕಪ್ ಇರುವಾಗ, ಈ ಪುಟ್ಟ ಗ್ರಂಥಾಲಯವೇ ಸ್ವರ್ಗವಾಗಿ ರೂಪ ತಳೆಯುತ್ತದೆ. ನಿಮಗೆ ಇಷ್ಟವಾದ ಪುಸ್ತಕ ಅಥವಾ ಮ್ಯಾಗಜಿನ್ ಓದುತ್ತ ಮೈ ಮರೆಯಿರಿ.
ಚಿಕ್ಕ ಚೊಕ್ಕ ಲಾಫ್ಟ್
ಜೀವನವನ್ನ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ
ಹಚ್ಚ ಹಸಿರಾದ ಗಿಡ-ಮರಗಳನ್ನು ನೋಡುತ್ತಲೋ ಅಥವಾ ಚುಕ್ಕಿಗಳಿಂದ ನಳನಳಿಸುತ್ತಿರುವ ಆಗಸವನ್ನು ವೀಕ್ಷಿಸುತ್ತಲೋ ಮೈ ಮರೆಯಬಹುದಾದ ಎತ್ತರದಲ್ಲಿರುವ ಒಂದು ಪ್ರಶಾಂತವಾದ ಪುಟ್ಟ ಜಾಗ. ಹೊಚ್ಚ ಹೊಸ ಬಣ್ಣಗಳು – ಮಿಂಟ್ ಗ್ರೀನ್ ಮತ್ತು ಫಾರೆಸ್ಟ್ ಎಮರಾಲ್ಡ್ ಇದ್ದರೆ ಎಂತಹ ಸೊಗಸು. ಜೊತೆಗೆ ಸಾಕಷ್ಟು ಬೆಳಕು ಸೂಸುವ ಕಿಟಕಿಗಳು.
ಗ್ರಾಮೀಣ ಶೈಲಿಯ ಸೊಬಗು
ಡಿನ್ನರ್‍ ಟೇಬಲ್ ಡ್ರಾಮಾ
ನಿಮ್ಮ ಡಿನ್ನರ್ ಟೇಬಲ್ ಅನ್ನು ಸ್ವಲ್ಪ ಸಾಂಪ್ರದಾಯಿಕ ಮತ್ತು ಸ್ವಲ್ಪ ವಿಭಿನ್ನ ಸಾಮಗ್ರಿಗಳಿಂದ ಅಲಂಕರಿಸಿ. ಡೈನಿಂಗ್ ಟೇಬಲ್ ಮೇಲಿನ ವಿನ್ಯಾಸ ಮತ್ತು ಜೀವಂತ ಬಣ್ಣಗಳು ಜೊತೆಗೂಡಲು, ನಿಮ್ಮ ವ್ಯಕ್ತಿತ್ವ ಕೂಡ ಅರಳುವುದು. ಈ ಡಿನ್ನರ್ ಟೇಬಲ್ ಮೇಲೆ ಮಾತುಕತೆ ನಡೆಯುವುದಷ್ಟೇ ಅಲ್ಲದೇ, ಡಿನ್ನರ್ ಟೇಬಲ್ ಸ್ವತಃ ನಿಮ್ಮ ಮಾತಿನ ಕೇಂದ್ರಬಿಂದು ಆಗಿರುತ್ತದೆ.
ರಂಗುರಂಗಿನ ಅಡುಗೆ ಮನೆ
ನಿತ್ಯವೂ ಮೃಷ್ಟಾನ್ನ ಭೋಜನ
ಪ್ರತಿದಿನ ಚಪ್ಪರಿಸಿ ತಿನ್ನುವಂತಹ ರುಚಿಯಾದ ಖಾದ್ಯಗಳಾಗಲಿ ಅಥವಾ ಸರಳ ಸಲಾಡ್ ಆಗಲಿ, ನಿಮ್ಮ ಅಡುಗೆ ಮನೆ ನಿಮಗೆ ಪ್ರೇರಣೆ ನೀಡುವಂತಿರಬೇಕು. ಕಣ್ಣಿಗೆ ಮುದ ನೀಡುವಂತಹ ಬಣ್ಣಗಳಿರಬೇಕು ಮತ್ತು ಪಾಲಿಶ್ ಮಾಡಿದ ಹೊಳೆಯುವ ಪಾತ್ರೆಗಳಿರುವ ಈ ಅಡುಗೆಮನೆಯಲ್ಲಿ ಕಡಿಮೆಯಾದರೂ ನಿಮಗೆ ಅವಶ್ಯಕವಾದುದೆಲ್ಲವೂ ದೊರೆಯುವಂತಿರಬೇಕು.
ನಿಮ್ಮ ನೆಚ್ಚಿನ ವಿಶ್ರಾಂತಿ ಕೋಣೆ
ನಿಮ್ಮ ಕೌಚ್ ಜೊತೆ ಅಳಿಯದ ಸ್ನೇಹ ಬೆಳೆಸಿ
ನೀವು ನಿರಾಳರಾಗಿ ಮಲಗಬಹುದಾದ ಕೌಚ್, ಸ್ವಲ್ಪ ಬಣ್ಣ ಚೆಲ್ಲುವ ಕುಶನ್ ಗಳು ಮತ್ತು ಸ್ನೇಹಿತರು, ಇಷ್ಟು ಸಾಕು ನಿಮ್ಮ ಲಿವಿಂಗ್ ರೂಮ್ ಮಾತುಕತೆಗೆ ಹೇಳಿ ಮಾಡಿಸಿದ ಜಾಗವಾಗಲು. ಕಡುಬಣ್ಣದ ಕೌಚ್ ಮತ್ತು ಕೆಲವು ಆಯ್ದ ಸೆಂಟರ್ ಪೀಸ್ ಗಳಿಂದ ಅಲಂಕರಿಸಿ.
ವಿಸ್ಮಯಕಾರಿ ಸಿಟ್ರಸ್
ನಿಮ್ಮ ಮನೆ ಮೇಲೆ ಸ್ವಲ್ಪ ತಾಜಾತನ ಸಿಂಪಡಿಸಿ
ನೀರಸ ಬೂದು ಬಣ್ಣ ಮತ್ತು ಬೇಜ್ ಬಣ್ಣ ಬಿಟ್ಟುಬಿಡಿ. ಬದಲಾಗಿ ಹಳದಿ, ಕಿತ್ತಳೆ ಮತ್ತು ಲೈಮ್ ಬಣ್ಣಗಳನ್ನು ಹಚ್ಚಿ, ಮನೆಗೆ ಹೊಚ್ಚ ಹೊಸ ರೂಪ ನೀಡಿ. ಬೇಸಿಗೆಯಲ್ಲಿ ಈ ಬಣ್ಣಗಳು ನಿಮ್ಮ ಮನೆಗೆ ತಾಜಾತನ ನೀಡುತ್ತವೆ.
  • That favourite corner

Latest Happenings in the Paint World

Get some inspiration from these trending articles

Get in Touch

Looking for something else? Drop your query and we will contact you.

  • Get in Touch
  • Store Locator
  • Download App
×

Get in Touch

Looking for something else? Drop your query and we will contact you.