Banner Image

ಪ್ರಸ್ತುತ – 2000

ವರ್ಷ 2000 - ಎಸ್ ಆರ್ ಕೆ ನೆರೊಲ್ಯಾಕ್ ನ ಬ್ಯ್ರಾಂಡ್ ಅಂಬಾಸೆಡರ್ ಆದರು 2006 - ಜಿ ಎನ್ ಪಿ ಎಲ್ ಅನ್ನು ಕನ್ಸೈ ನೆರೊಲ್ಯಾಕ್ ಎಂದು ಹೆಸರಿಸಲಾಯಿತು. 2004-2006 ವರೆಗೆ, ಲೋಟೆ ಮತ್ತು ಜೈನ್ಪುರ ಫ್ಯಾಕ್ಟರಿಗಳಿಗೆ ಅನುಕ್ರಮವಾಗಿ ಗ್ರೀನ್ ಟೆಕ್ ಸುರಕ್ಷತಾ ಪ್ರಶಸ್ತಿ ಚಿನ್ನ ಮತ್ತು ರಜತವನ್ನು ನೀಡಲಾಯಿತು. ಈ ಘಟಕಗಳಿಗೆ ಓ ಎಚ್ ಎಸ್ ಎ ಎಸ್18001 ಸರ್ಟಿಫಿಕೇಶನ್ ಕೂಡ ನೀಡಲಾಯಿತು. ಬ್ಯ್ರಾಂಡ್ ನೆರೊಲ್ಯಾಕ್ ಗೆ ಹೆಚ್ಚು ಗಮನ ನೀಡುವ ದೃಷ್ಟಿಯಿಂದ ಶ್ರೀಯುತ ಅಮಿತಾಭ್ ಬಚ್ಚನ್ ಅವರನ್ನು ಬ್ಯ್ರಾಂಡ್ ಅಂಬಾಸೆಡರ್ ಮಾಡಲಾಯಿತು. ಆಕಾಂಕ್ಷಾ ಫೌಂಡೇಶನ್ ಜೊತೆಗೆ ಸೇರಿಕೊಂಡು ಬಡ ಮಕ್ಕಳಿಗೆ ಸಹಾಯ ನೀಡಲು ಉಪಕ್ರಮ ತೆಗೆದುಕೊಳ್ಳಲಾಯಿತು.

Banner Image

2000-1991

2000 ರ ಹೊತ್ತಿಗೆ ಫೋರ್ಬ್ಸ್ ಗೋಕಕ್ ಮತ್ತು ಅದರ ಸಹಯೋಗಿಗಳ ಸಂಪೂರ್ಣ ಸ್ವಾಧೀನವನ್ನು ಪಡೆದುಕೊಂಡ ನಂತರ ಸಂಸ್ಥೆಯು 1999 ರಲ್ಲಿ ಕನ್ಸೈ ಪೇಂಟ್ಸ್ ನ ಅಂಗಸಂಸ್ಥೆಯಾಯಿತು. ಈ ವೇಳೆಗೆ ಸಂಸ್ಥೆಯ ಒಟ್ಟು ಇಕ್ವಿಟಿಯ 64.52% ದಷ್ಟು ಪಾಲುದಾರಿಕೆಯನ್ನು ಕನ್ಸೈ ಪೇಂಟ್ಸ್ ಹೊಂದಿತ್ತು. ನೆರೊಲ್ಯಾಕ್ ನ “ಜಬ್ ಘರ್ ಕಿ ರೌನಕ್ ಬಢಾನೀ ಹೋ” ಎಂಬ ಜಿಂಗಲ್ ಪ್ರಸಿದ್ಧವಾಯಿತು.

Banner Image

1990- 1981

1983 ರಲ್ಲಿ, ನೆರೊಲ್ಯಾಕ್ ಜಿ ಎನ್ ಪಿ101 ಆಟೋ ಪೇಂಟ್ಸ್ ಅನ್ನು ಬಾಂಬೆ ಮತ್ತು ಪುಣೆ ನಗರಗಳಲ್ಲಿ ಶುರು ಮಾಡಿತು. ಅದು 24 ಬೇಸಿಕ್ ಶೇಡ್ ಗಳನ್ನು, 12 ಮೆಟಲಿಕ್ ರೇಂಜ್ ಶೇಡ್ ಗಳನ್ನು ಮತ್ತು 12 ವೈಬ್ರಂಟ್ ರೇಂಜ್ ಶೇಡ್ ಗಳನ್ನು ಒಳಗೊಂಡಿತ್ತು. 1986 ರಲ್ಲಿ, ಜಪಾನಿನ ಜಿ ಎನ್ ಪಿ ಎಲ್ ಕನ್ಸೈ ಪೇಂಟ್ಸ್ ಕಂಪನಿ ಲಿಮಿಟೆಡ್ ಜೊತೆಗೆ ಓಸಾಕಾ ನಗರದಲ್ಲಿ ಟಿಎಎ ಗೆ ಸಹಿ ಹಾಕಿತು. ಈ ಟಿಎಎ ಮೂಲಕ ಆಟೊಮೋಟಿವ್ ಉತ್ಪಾದನೆಗಳಿಗಾಗಿ ಕ್ಯಾಥೋಡಿಕ್ ಎಲೆಕ್ಟ್ರೋದಿಪೋಸಿಷನ್ ಪ್ರೈಮರ್ ಮತ್ತು ಇತರ ಸಾಫಿಸ್ಟಿಕೇಟೆಡ್ ಕೋಟಿಂಗ್ ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. ಜಿ ಎನ್ ಪಿ ಎಲ್ ಭಾರತದಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಿದ ಪ್ರಥಮ ಸಂಸ್ಥೆಯಾಯಿತು.

Banner Image

1980- 1950

1970 ರಲ್ಲಿ, ಗುಡಿ ಎಂಬ ನಗುಮುಖದ ಹುಲಿಯನ್ನು ಸಂಸ್ಥೆಯ ಮಾಸ್ಕಾಟ್/ಶುಭಕಾರಿ ಆಗಿ ಪರಿಚಯಿಸಲಾಯಿತು. 1957 ರಲ್ಲಿ, ಸಂಸ್ಥೆಯ ಹೆಸರನ್ನು ಗುಡ್ ಲ್ಯಾಸ್ ನೆರೊಲ್ಯಾಕ್ ಪೇಂಟ್ ಪ್ರೈ. ಲಿ. ಎಂದು ಬದಲಾಯಿಸಲಾಯಿತು. ಸಂಸ್ಥೆಯ ಹೆಸರಲ್ಲಿ ಅದರ ಅತ್ಯಂತ ಯಶಸ್ವಿ ಉತ್ಪಾದನೆಯ ಬ್ಯ್ರಾಂಡ್ ಹೆಸರನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ಹೀಗೆ ಮಾಡಲಾಯಿತು. 1968 ರಲ್ಲಿ ಸಂಸ್ಥೆಯು ಸಾರ್ವಜನಿಕವಾಯಿತು ಮತ್ತು “ಪ್ರೈವೇಟ್” ಎಂಬ ಪದವನ್ನು ತೆಗೆಯಲಾಯಿತು. 1950 ರ ದಶಕದಲ್ಲಿ, ಎಂಟಿ-ಗ್ಯಾಸ್ ವಾರ್ನಿಶ್ ಸಂಸ್ಥೆಯ ಅತ್ಯಂತ ಪ್ರಸಿದ್ಧ ಉತ್ಪಾದನೆಯಾಗಿತ್ತು ಮತ್ತು ಇದನ್ನು ಮುಖ್ಯವಾಗಿ ರಕ್ಷಣಾ ಕ್ಷೇತ್ರದಲ್ಲಿ ಉಪಯೋಗಿಸಲಾಗುತ್ತಿತ್ತು.

Banner Image

1920 ರ ಪ್ರಾರಂಭದಲ್ಲಿ

ನವಂಬರ್ 1930 ರಲ್ಲಿ, ಗುಡ್ ಲ್ಯಾಸ್ ವಾಲ್ ಮತ್ತು ಲೆಡ್ ಇಂಡಸ್ಟ್ರೀಸ್ ಗ್ರೂಪ್ ಲಿ. ಸಂಸ್ಥೆಯನ್ನು ರೂಪಿಸುವುದಕ್ಕಾಗಿ ಯು.ಕೆ. ಯ ಮೂರು ಬ್ರಿಟಿಷ್ ಸಂಸ್ಥೆಗಳು ಒಟ್ಟುಗೂಡಿದವು. ಅನಂತರ ಅದು ಲೆಡ್ ಇಂಡಸ್ಟ್ರೀಸ್ ಗ್ರೂಪ್ (ಎಲ್ ಐ ಜಿ) ಲಿ. ಆಯಿತು. ಏಪ್ರಿಲ್ 1993 ರಲ್ಲಿ, ಎಲ್ ಐ ಜಿ, ಲಿವರ್ ಪೂಲ್, ಇಂಗ್ಲೆಂಡ್ ಈ ಸಂಸ್ಥೆಯನ್ನು ಖರೀದಿಸಿ ಅದನ್ನು ಗುಡ್ ಲ್ಯಾಸ್ ವಾಲ್ (ಇಂಡಿಯಾ) ಲಿ. ಎಂದು ಹೆಸರಿಸಿತು. 1920 ರ ಪ್ರಾರಂಭದಲ್ಲಿ ಎಲನ್ ಬ್ರೋಸ್. ಅಂಡ್ ಕಂ. ಲಿ. ಎಂಬ ಇಂಗ್ಲಿಷ್ ಸಂಸ್ಥೆ ಅಮೆರಿಕನ್ ಪೇಂಟ್ ಮತ್ತು ವಾರ್ನಿಶ್ ಕಂಪನಿಯನ್ನು ಖರೀದಿಸಿತು. ಅನಂತರ ಇದು ಗಹಗನ್ ಪೇಂಟ್ ಅಂಡ್ ವಾರ್ನಿಶ್ ಕಂ. ಲಿ. ಆಯಿತು.

ನಮ್ಮ ಬಗ್ಗೆ

1920 ರಲ್ಲಿ ಮುಂಬೈನ ಲೋವರ್ ಪರೇಲ್ ನಲ್ಲಿ ಗಹಗನ್ ಪೇಂಟ್ಸ್ ಅಂಡ್ ವಾರ್ನಿಶ್ ರೂಪ ಪಡೆಯಿತು. ಒಂದು ಶತಮಾನದ ನಂತರ ಈ ಸಂಸ್ಥೆಯು ಭಾರತದ ಎರಡನೇ ಅತಿ ದೊಡ್ಡ ಪೇಂಟ್ ಸಂಸ್ಥೆಯಾಗಿ ಮತ್ತು ಉದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಹೆಸರುಗಳಲ್ಲಿ ಒಂದಾಗಿ ಹೊರಹೊಮ್ಮುವ ಮೂಲಕ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ.

ಒಂದು ಸಣ್ಣ ಪೇಂಟ್ ಸಂಸ್ಥೆಯಿಂದ ಕನ್ಸೈ ನೆರೊಲ್ಯಾಕ್ ನಂತಹ ದೈತ್ಯ ಸಂಸ್ಥೆಯಾಗಲು ಹೇಗೆ ಸಾಧ್ಯ?

ಈ ಹಂತಕ್ಕೆ ತಲುಪಬೇಕೆಂದರೆ ಕಠಿಣ ಪರಿಶ್ರಮ ಮತ್ತು ಉತ್ಸಾಹ ಬೇಕು. ಬದ್ಧತೆ ಮತ್ತು ಧೈರ್ಯ ಬೇಕು. ಅಂದರೆ ದಿನನಿತ್ಯ ವಿಭಿನ್ನ ಸಂಶೋಧನೆಯೊಂದಿಗೆ ಮುನ್ನುಗ್ಗುಬೇಕಾಗುತ್ತದೆ. ಇದು ಅಪಾಯಗಳನ್ನು ಕೈಗೊಳ್ಳುವುದು ಹಾಗೂ ಅದು ಕೆಲಸ ಮಾದಿದಾಗ ಅದರಲ್ಲೇ ಸಂತೋಷ ಕಾಣುವುದನ್ನು ಒಳಗೊಂಡಿರುತ್ತದೆ. ಅವುಗಳು ಕೆಲಸ ಮಾಡದಾಗ ನಾವು ಮತ್ತೆ ಡ್ರಾಯಿಂಗ್ ಬೋರ್ಡಗೆ ಹೋಗಬೇಕಾಗುತ್ತದೆ. ಇದರರ್ಥ, ಗ್ರಾಹಕರ ಬೇಡಿಕೆಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವುದು ಮತ್ತು ಅದೇ ವಾತಾವರಣದಲ್ಲಿ ತನ್ಮಯರಾಗಿರುವುದಾಗಿದೆ. ಇಷ್ಟೆಲ್ಲ ಸಾಧಿಸಬೇಕೆಂದರೆ ಆರ್ ಆಂಡ್ ಡಿ, ತಂತ್ರಜ್ಞಾನ, ಹಾಗೂ ಕೆಲಸಗಾರ ಮೇಲೆ ಸಾಕಷ್ಟು ಸಮಯ ಮತ್ತು ಹಣ ವ್ಯಯಿಸಬೇಕಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ನಾವು ನೀಡಲಿರುವ ಉತ್ಪಾದನೆಯಲ್ಲಿ ಅಚಲ ನಂಬಿಕೆ ಮತ್ತು ದೃಢ ಧ್ಯೇಯದ ಅಗತ್ಯವಿರುತ್ತದೆ.

ಈ ಎಲ್ಲ ಕಾರಣಗಳಿಂದಾಗಿ ಮತ್ತು ಇನ್ನೂ ಹಲವಾರು ಸಂಗತಿಗಳಿಂದಾಗಿ ಕನ್ಸೈ ನೆರೊಲ್ಯಾಕ್ ಭಾರತದಲ್ಲಿ ಎರಡನೇ ಅತಿ ದೊಡ್ಡ ಕೋಟಿಂಗ್ ಸಂಸ್ಥೆಯಾಗಿದೆ ಮತ್ತು ಇಂಡಸ್ಟ್ರಿಯಲ್ ಕೋಟಿಂಗ್ ಗಳಲ್ಲಿ ಮಾರುಕಟ್ಟೆಯ ಮುಂಚೂಣಿಯಲ್ಲಿದೆ.

NEROLLAC

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ